Bambrana Family of Sri Kshetra Ambiladka

ಬಂಬ್ರಾಣ ಕುಟುಂಬ

ತುಳುನಾಡಿನ ಇತಿಹಾಸ ಪ್ರಸಿದ್ಧವಾದ ಮತ್ತು ಬಂಟ ಮನೆತನಗಳಲ್ಲಿ ಶ್ರೇಷ್ಠ ಮನೆತನವೆನಿಸಿದ ಬಂಬ್ರಾಣ ಕುಟುಂಬದಲ್ಲಿ ಹುಟ್ಟಿ ಬೆಳೆದ ನಾವು ಧನ್ಯರು. ಸುಮಾರು ೮೦೦ ವರ್ಷಗಳ ಇತಿಹಾಸವನ್ನು ಹೊಂದಿರುವ ನಮ್ಮ ಮನೆತನವು ತುಳುನಾಡಿನ ಹಿರಿಯ ಮನೆತನವೆಂದು ಹೇಳಲು ಸಂತೋಷವಾಗುತ್ತದೆ.

ಬಂಬ್ರಾಣ ಮನೆತನದ ಮೂಲಸ್ಥಾನವಾದ ಧೂಮವತಿ, ಕೊರತಿ ದೈವಗಳನ್ನು ಆರಾಧಿಸಿಕೊಂಡು ಹಾಗೆಯೇ ಯಜಮಾನಿಕೆಯ ಸ್ಥಾನವಾದ ಬಂಬ್ರಾಣದಲ್ಲಿ ಶ್ರೀ ಕಿದೂರು ಮಹಾದೇವ, ಬಂಬ್ರಾಣ ಹಾಗೂ ಪಾರೆಸ್ಥಾನದಲ್ಲಿ ಆಲಿಚಾಮುಂಡಿ. ಅಂಬಿಲಡ್ಕದಲ್ಲಿ ಪೂಮಾಣಿ ಕಿನ್ನಿಮಾಣಿ ದೈವಗಳನ್ನು ನಮ್ಮ ಹಿರಿಯರ ಕಾಲದಿಂದಲೂ ಆರಾಧಿಸಿಕೊಂಡು ಬಂದಿದ್ದು, ಇಡೀ ಸೀಮೆಯ ಜನರಲ್ಲಿ ಜಾತಿ ಮತ ಭೇದವಿಲ್ಲದೆ ಅನ್ಯೋನತೆಯಿಂದ ನಡೆದು ಇಡೀ ಊರಿಗೆ ನಾಯಕತ್ವವನ್ನು ನೀಡಿದ ಕೀರ್ತಿ ನಮ್ಮ ಕುಟುಂಬಕ್ಕೆ ಸಲ್ಲುತ್ತದೆ.

ಮಾತೃ ಪ್ರಧಾನ ಕೂಡು ಕುಟುಂಬವಾಗಿ ಹಲವಾರು ವರುಷಗಳಿಂದ ಬಾಳಿದ, ನಮ್ಮ ಸಂಸಾರದ ಸದಸ್ಯರು ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ವೃತ್ತಿಯನ್ನು ಆರಿಸಿಕೊಂಡು ದೇಶ ವಿದೇಶಗಳಲ್ಲಿ ನೆಲೆಸುವಂತಹ ಪರಿಸ್ಥಿತಿ ಒದಗಿದೆ.