About Sri Kshetra Ambiladka Poomani Kinnimani Daivasthana

ಪೂಮಾಣಿ ಕಿನ್ನಿಮಾಣಿ ದೈವಸ್ಥಾನ ಅಂಬಿಲಡ್ಕ ಹಿನ್ನೆಲೆ

ಅಂಬಿಲಡ್ಕ ದೈವಸ್ಥಾನವು ಐತಿಹಾಸಿಕ ಹಿನ್ನಲೆಯುಳ್ಳ ಪ್ರಾಚೀನ ದೈವಸ್ಥಾನಗಳಲ್ಲಿ ಒಂದಾಗಿದ್ದು, ಕುಂಬಳೆ ಸೀಮೆಯ ಐದನೇಯ ಆದರೆ ಅತಿ ಶಕ್ತಿಯುತ ಇರುವೆರ್ ಉಳ್ಳಾಕ್ಲು ಪೂಮಾಣಿ ಕಿನ್ನಿಮಾಣಿ ದೈವಗಳ ಕ್ಷೇತ್ರ, ಸಾವಿರಾರು ಭಕ್ತಾದಿಗಳಿಗೆ ಮನಃ ಶಾಂತಿ ನೆಮ್ಮದಿಯನ್ನು ನೀಡುವ ಕಾರಣಿಕ ಕ್ಷೇತ್ರವಾಗಿ ಕಂಗೊಳಿಸುತ್ತಿದೆ. ತುಳುನಾಡಿನ ಸತ್ಯದ ಸೀಮೆ ಎಂದೇ ಕೊಂಡಾಡಲ್ಪಟ್ಟ ಕುಂಬಳೆ ಮೂರು ಸಾವಿರ ಸೀಮೆಯಲ್ಲಿ, ಊರು ಮತ್ತು ಸೀಮೆಗಳನ್ನು ಉಳಿಸಲು ಅಂಬಿಲಡ್ಕ ಧರ್ಮದ ಮಣ್ಣಿನಲ್ಲಿ ಬಂಬ್ರಾಣ ಶಾಂತಾಳ್ವರಿಗೆ ಒಲಿದು, ಪಟ್ಟದ ದೈವ ಬೀರ್ನಾಳ್ವನೊಂದಿಗೆ ನೆಲೆಯಾದರು ಇರ್ವರು ಅರಸು ಉಳ್ಳಾಕುಲು ಪೂಮಾಣಿ ಕಿನ್ನಿಮಾಣಿ. ಹಿಂದೆ (ಇಂದಿಗೂ) ಅತಿ ವಿಶಾಲವಾದ ಜಾಗ ಅಡ್ಕ ಮತ್ತು ಪದವು ಎಂಬ ತುಳು ಪದಗಳು ಅರ್ಥ ಅದುವೇ, ಅಲ್ಲಿ ಬಹಳ ಹಸುಗಳು ಮೇಯುತ್ತಿದ್ದ ಕಾರಣ ತುಂಬಾ ಸೆಗಣಿ ಸಿಗುತ್ತಿತ್ತು ಹಾಗಾಗಿ ಅಂಬಿಲಡ್ಕವೆಂದು ಕರೆಯುತ್ತಿದ್ದರು.

ಇಲ್ಲಿ ನೆಲೆಸಿರುವ ದೈವಗಳಿಗೆ ಅದರದ್ದೇ ಆದ ಒಂದೊಂದು ಸತ್ಯ ಐತಿಹ್ಯಗಳು ಇದೆ. ಹಾಗೆ ಅರಸು ದೈವಗಳಲ್ಲಿ ಮೇಲ್ಪಂಕ್ತಿಯಲ್ಲಿರುವ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಗಳಿಗೆ ಸುಮಾರು 700 ವರ್ಷಗಳ ಹಿಂದಿನ ಚರಿತ್ರೆಯಿದೆ. ಶ್ರೀ ದೈವಗಳ ಸತ್ಯಘಟನೆ ಸಂಬಂದಿತ ಅನೇಕ ಕುರುಹುಗಳು ಇದೀಗಲೂ ನಮ್ಮ ತುಳುನಾಡಿನಲ್ಲಿ ಕಾಣಸಿಗುತ್ತದೆ. ಶ್ರೀ ಪೂಮಾಣಿ ಕಿನ್ನಿಮಾಣಿ ದೈವಗಳು ಒಂದೇ ತೊಟ್ಟಿಲಿನಲ್ಲಿ ಜನಿಸಿ ಮೇಘ ಲೋಕದಿಂದ ತುಳುನಾಡಿಗೆ ಬಂದರೆಂಬ ಪ್ರತೀತಿ ಇದೆ. ವೈದಿಕವಾಗಿ ಇವರು ಶ್ರೀರಾಮ ಲಕ್ಷ್ಮಣರ ಅವತಾರವೆಂದು ನಂಬುತ್ತಾರೆ.

ಬೆಳ್ಳಿ ಕುದುರೆಯಲ್ಲಿ ಘಟ್ಟದ ಮೇಲಿಂದ ಯಾತ್ರೆ ಆರಂಭಿಸಿದ ದೈವಗಳು ಕುಮಾರ ಪರ್ವತದಿಂದ ನೋಡಿದಾಗ ಕುಕ್ಕೆ ಕ್ಷೇತ್ರದಲ್ಲಿ ಧ್ವಜವೇರಿ ಸುಬ್ರಹ್ಮಣ್ಯನ ಜಾತ್ರೋತ್ಸವವು ನಡೆಯುತ್ತಾ ಇರುತ್ತದೆ. ಆಗ ದೈವಗಳು ಕುಮಾರ ಸ್ವಾಮಿಯಲ್ಲಿ ತಮಗೆ ಧ್ವಜವನ್ನು ಕೊಡಬೇಕೆಂದು ಕೇಳಿಕೊಂಡಾಗ ಕುಮಾರಸ್ವಾಮಿ ನಿರಾಕರಿಸಲು, ಅಣ್ಣ ತಮ್ಮ ದೈವಗಳಿಗೆ ಮತ್ತು ಸುಬ್ರಾಯ ದೇವರಿಗೆ ಏಳು ಹಗಲು ಮಾತು ಏಳು ರಾತ್ರಿ ಯುದ್ಧವು ನಡೆದು, ದೈವಗಳು ಸುಬ್ರಹ್ಮಣ್ಯನ ಧ್ವಜವನ್ನು ಮುರಿದು ಯುದ್ಧ ಸಮಾಪ್ತಿ ಮಾಡಿ, ಸುಬ್ರಾಯ ದೇವರೊಂದಿಗೆ ರಾಜಿಯನ್ನು ಮಾಡಿಕೊಂಡು, ಕುಂಬಳೆ ಸೀಮೆಯ ಕಡೆಗೆ ಮುಖಮಾಡಿ ಹೊರಟರು. ಕುಕ್ಕೆಯಿಂದ ಹೊರಟ ಶ್ರೀ ಅರಸು ದೈವಗಳು ತಮ್ಮ ಯಾತ್ರೆಯ ಉದ್ದೇಶದಂತೆ "ಆದಿ ಪಡುಮಲೆ ಅಂತ್ಯ ಪುತ್ಯೆ" ಯ ಪ್ರಕಾರ ಹಲವಾರು ಪ್ರದೇಶಗಳಲ್ಲಿ ಕಾರಣಿಕಗಳನ್ನು ಪ್ರದರ್ಶಿಸಿ, ಹಲವಾರು ಕಡೆಗಳಲ್ಲಿ ನೆಲೆಯೂರಿ, ಧ್ವಜವೇರಿಸಿ, ಜಾತ್ರೋತ್ಸವ ನಡೆಸಿ, ಕುಂಬಳೆ ಸೀಮೆಯ ನಾಲ್ಕು ದೇವಸ್ಥಾನಗಳಲ್ಲಿ ಮೊದಲನೆಯದಾದ ಅಡೂರು ಮಹಾಲಿಂಗೇಶ್ವರನಿಗೆ ಕಪ್ಪವನ್ನ ನೀಡಿ, ಕುಂಬಳೆ ಮೂರು ಸಾವಿರ ಸೀಮೆಯ ಪಟ್ಟದ ದೈವವಾದ ಬಿರ್ಣಾಳ್ವ ಮತ್ತು ಧೂಮಾವತೀಯನ್ನು ಭೇಟೀಯಾಗಿ ಅವರನ್ನು ಒಲಿಸಿ, ತಮ್ಮ ಜೊತೆ ಕಾರಣಿಕ ಮೆರೆಯಲು ಜೊತೆಯಾಗಿ ಸವಾರಿ ಆರಂಭಿಸಿದರು. ಬೆಳ್ಳಿಯ ಕುದುರೆಯ ಮೂಲಕ ಪುತ್ತಿಗೆ ಹೊಗಲತ್ತಿರಲು ದಾರಿಯಲ್ಲಿ ಅಂಬಿಲಡ್ಕ ಎಂಬ ಪುರಾತನ ಧರ್ಮದ ಕ್ಷೇತ್ರದಲ್ಲಿ ಕಟ್ಟೆಯನ್ನು ಕಂಡು ವಿಶ್ರಮಿಸುವರು. ಆಗ ಅಲ್ಲಿ ವಿಶ್ರಮಮಿಸುತ್ತಿರುವ ಈ ಇಬ್ಬರು ರಾಜಕುಮಾರರು ಮತ್ತು ಅವರ ಪರಿವಾರವನ್ನು ಬಂಬ್ರಾಣದ ಮಹಾಮಹಿಮನಾದ ಶ್ರೀ ಶಾಂತಾಳ್ವರೂ ಕಂಡು ಅತ್ಯಂತ ಆಶ್ಚರ್ಯಗೊಂಡು ಕಿದೂರು ಮಹಾಲಿಂಗೇಶ್ವರ ದೇವಾಲಯದ ತಂತ್ರಿಗಳಲ್ಲಿ ಕೇಳಲು, ತಂತ್ರಿಗಳು ಇವರು ಅಂತಿಂಥವರಲ್ಲ, ಒಂದೇ ತೊಟ್ಟಿಲಿನ ಶಿಶುಗಳು ಪೂಮಾಣಿ ಕಿನ್ನಿಮಾಣಿ. ಅವರಿಗೆ ಅಂಬಿಲಡ್ಕದ ಧರ್ಮದ ಮಣ್ಣಿನಲ್ಲಿ ನೆಲೆಯಾಗಲು ಇಷ್ಟವಾಗಿದೆ ಎಂದು ತಿಳಿಸಲು ಮಹಾಮಹಿಮಾ ಬಂಬ್ರಾಣ ಶ್ರೀ ಶಾಂತಾಳ್ವ ತಮ್ಮ ಜೊತೆಯಿದ್ದ ಬಂಬ್ರಾಣ ಗ್ರಾಮದ 7 ಪ್ರತಿಷ್ಠಿತ ಪ್ರಮುಖ ಮನೆತನಗಳ ಪ್ರಮುಖರಾದ ;

ಬಂಬ್ರಾಣ ಬೈಲು ಕಿಂಞಿಣ್ಣ,

ಕೆಳಗಿನ ಬೈಲು ಸಂಕರ,

ನೀಲಪ್ಪಾಡಿ ಸೇಕ,

ಉಜಾರು ಸಂಕಯ್ಯಾಳ್ವ,

ಮುಗೇರ್ (ಕಾರ್ನಾಪ್ಪಾಡಿ) ಕೊಂಡೆ,

ಕೆಳಗಿನ ಉಜಾರ್ ಸಾಂತ,

ಹಾಗೂ ಮುಗೇರಿನ ಸಾಂತರನ್ನು

ಸೇರಿಸಿ ಅಂಬಿಲಡ್ಕದಲ್ಲಿ ಆರಾಧನೆ ಆರಂಭಿಸಿದರು. ಅಲ್ಲಿಂದ ಮುಂದೆ ದೈವಗಳ ಸವಾರಿ ಪುತ್ತಿಗೆಗೆ ಆರಂಭಗೊಂಡಾಗ ಪಟ್ಟದ ದೈವ ಬೀರ್ಣಾಳ್ವನು ಅಂಬಿಲಡ್ಕದಲ್ಲೇ ನೆಲೆಯಾದನು ಹಾಗೂ ಧೂಮಾವತೀ ತಾಯಿಯು ಪುತ್ತಿಗೆಯ ಕಡೆಗೆ ಅಣ್ಣತಮ್ಮ ದೈವಗಳ ಜೊತೆ ಸವಾರಿ ಹೊರಟು ಅಂತ್ಯ ಪುತ್ತಿಗೆಯಲ್ಲಿ ನೆಲೆಯಾದರು.

IN LOVE WITH BALI

We are a couple of nomads who used to explore the globe. The day we stepped our foot on Balinese ground one thing was clear - we fell in love. We kept coming back every few months and understood that this is a love affair for a lifetime. We fully moved here in 2018 and been exploring the island ever since. We’re excited to share what we’ve found and show you this beautiful corner of the world.